ಆಶಾಡದ ಗಾಳಿ ತಣ್ಣಗಾಗುತ್ತಿದೆ ಎಂದರೆ ಅದು ಶ್ರಾವಣ ಮಾಸ ಆರಂಭದ ಮುನ್ಸೂಚನೆ. ಆಶಾಡದ ಗಾಳಿ ಯರ್ರಾ ಬಿರ್ರಿ ಬೀಸಿ ಜನರನ್ನು ನಲುಗಿಸಿದರೆ ಶ್ರಾವಣದಲ್ಲಿ ಒಂದಷ್ಟು ಜನ ಪೂಜೆ ನೆಪದಲ್ಲಿ ಪರೋಕ್ಷ ವಸೂಲಿ ಮಾಡುವುದರ ಮೂಲಕ ಜನರನ್ನು ನಲುಗಿಸಿಬಿಡುತ್ತಾರೆ. ಆದರೂ ಶ್ರಾವಣ ಮಾಸದ ಪ್ರತೀ ಶನಿವಾರ ಜನರಿಗೆ ಎರಡು ಬಿಳಿ ಒಂದು ಕೆಂಪು ನಾಮ ಬಳಿಯುವ ಈ 'ದಾಸಪ್ಪ' ಅಥವಾ 'ದಾಸಯ್ಯ' ನವರ ಪಾದ ಪೂಜೆ ಮಾಡಲು ಜನರು ಮುಗಿಬೀಳುತ್ತಿರುತ್ತಾರೆ.
ಶ್ರಾವಣವನ್ನು ಕೆಲವು ಜನರು ಉಪವಾಸ ಮಾಡಿ, ಪೂಜೆ ಮಾಡಿ, ಮಾಂಸಾಹರ ಬಿಟ್ಟು ಬರೇ ಸಸ್ಯಹಾರ ತಿಂದು ಆಚರಣೆ ಮಾಡುವುದುಂಟು. ದೇವಸ್ಥಾನಗಳಲ್ಲಿ ದೇವರ ಜೊತೆ ವ್ಯವಹರಿಸಲು ಪೂಜಾರಿ ಇರುವ ಹಾಗೆ ಶ್ರಾವಣ ಮಾಸದಲ್ಲಿ ಮನೆಗಳಲ್ಲಿ ನಡೆಯುವ ಪೂಜೆಗಳನ್ನು ಜನರು ದಾಸಪ್ಪನವರ ಕೈಲಿ ಮಾಡಿಸುತ್ತಾರೆ. ಇಷ್ಟೇ ಅಲ್ಲದೆ ವಿಷೇಶ ಸಂದರ್ಭಗಳಲ್ಲಿ ಸತ್ಯ ನಾರಾಯಣ ಪೂಜೆ, ಶನಿ ದೇವರ ಪೂಜೆಗಳನ್ನು ಸಹ ಒಬ್ಬೊಬ್ಬ ಸ್ವೆಷಲಿಸ್ಟ್ ಪೂಜಾರಿಗಳ ಕೈಯಲ್ಲಿ ಮಾಡಿಸುವುದುಂಟು. ಯಾಕೆ ನಾವು ಪ್ರತೀ ಸಾರಿಯೂ ದೇವರ ಜೊತೆ ವ್ಯವಹರಿಸಲು ಹಿಂದೇಟು ಹಾಕುತ್ತಿದ್ದೇವೆ? ನಾವು ಮಾಡುವ ಪೂಜೆ ಪೂಜೆ ಅಲ್ಲವೇ? ಪೂಜೆ ಮಾಡುವುದಕ್ಕೆ ವಿಶೇಷ ಏಜೆಂಟರುಗಳು ಅವಶ್ಯಕತೆ ಏನಿದೆ? ದೇವರಿಗೆ ನಾವು ಮಕ್ಕಳಲ್ಲವೇ? ಹಾಗಿದ್ದರೆ ಅಪ್ಪ ಅಮ್ಮನ ಜೊತೆ ಮಾತನಾಡಲು ನಮಗೇನಾದರೂ ಮತ್ತೊಬ್ಬರ ಸಹಾಯ ಬೇಕೆ?
ಹೀಗೆ ಯೋಚಿಸುವುದಾದರೆ ದೇವರಿಗೆ ನಮ್ಮ ಭಕ್ತಿಯನ್ನು ಮುಟ್ಟಿಸಲು ಮತ್ತೊಬ್ಬರ ಅವಶ್ಯಕತೆ ಇಲ್ಲವೇ ಇಲ್ಲ. ನಾವು ಮಾಡುವುದು ಪೂಜೆಯನ್ನೇ, ದಾಸಪ್ಪ ಪೂಜಾರಪ್ಪ ಮಾಡುವುದು ಸಹ ಪೂಜೆಯನ್ನೇ. ಅರ್ಥವಾಗದ ಒಂದೆರಡು ಮಂತ್ರಗಳನ್ನು ಉದುರಿಸುವುದರಿಂದ ಇಂತಹ ವಸೂಲಿ ಜನರು ನಮಗೆ ವಿಶೇಷವಾಗಿ, ದೇವರ ಬಲಗೈ ಬಂಟರಾಗಿ, ದೇವರಿಗೆ ನಮ್ಮ ಕಷ್ಟಗಳನ್ನು ತಿಳಿಸುವ ಪ್ರತಿನಿಧಿಗಳಾಗಿ ಕಾಣುತ್ತಾರಷ್ಟೆ. ಇಲ್ಲಿ ನಾನು ಹೇಳಲು ಹೊರಟಿರುವುದು ಶ್ರಾವಣ ಮಾಸದಲ್ಲಿ ವಸೂಲಿಗೆ ನಿಲ್ಲುವ ದಾಸಯ್ಯರ ಬಗ್ಗೆ ಹೀಗಾಗಿ ಸತ್ಯ ನಾರಯಣ ಪೂಜೆ, ಶನಿ ದೇವರ ಪೂಜೆ ಎಲ್ಲವನ್ನೂ ಇಲ್ಲಿ ತುರುಕುವ ಅವಶ್ಯಕತೆ ಇಲ್ಲ ಎನಿಸುತ್ತದೆ.
ಮುಖ್ಯವಾಗಿ ತಿರುಪತಿ ತಿಮ್ಮಪ್ಪ ಅಥವಾ ಹನುಮಂತನ ಒಕ್ಕಲಿನವರು (ಈ ದೇವರುಗಳನ್ನು ಮನೆ ದೇವರಾಗಿ ಪೂಜಿಸುವವರು) ಶ್ರಾವಣ ಮಾಸದ ಯಾವುದಾದರೂ ಒಂದು ಶನಿವಾರ ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಈ ವಿಶೇಷ ಪೂಜೆ ಮಾಡಲು ದಾಸಯ್ಯನ ಮುಂದೆ ಅಂಗಲಾಚಿ ಬೇಡಿ ಕರೆತಂದು ಅವನ ಕೈಯಲ್ಲೇ ಪೂಜೆ ಮಾಡಿಸುತ್ತಾರೆ. ಶ್ರಾವಣ ಮಾಸದಲ್ಲಿ ಈ ದಾಸಯ್ಯನವರಿಗೆ ಇರುವ ಬೇಡಿಕೆ ಬಹುಶಃ ಸಿ.ಎಂ ಪಿ.ಎಂ ಗಳಿಗೂ ಇಲ್ಲವೇನೋ!, ಒಂದೇ ದಿನದಲ್ಲಿ 15-20 ಮನೆಗಳಲ್ಲಿ ಪೂಜೆ ಮಾಡಿ ಮನೆಯವರಿಗೆ ಉಂಡೆ ನಾಮ ತಿಕ್ಕಿ ತಮ್ಮ ಜೇಜು ತುಂಬಿಸಿಕೊಳ್ಳುತ್ತಾರೆ. ಮೊದ ಮೊದಲು ನೂರು ಇನ್ನೂರು ರೂಪಾಯಿಗಳಿಗೆಲ್ಲಾ ತೃಪ್ತರಾಗುತ್ತಿದ್ದ ಇವರು ಇತ್ತೀಚಿನ ದಿನಗಳಲ್ಲಿ ಐನೂರರ ಗರಿ ಗರಿ ನೋಟಿಲ್ಲದೆ ಪೂಜೆ ಮಾಡುವುದಿಲ್ಲ.
ಈ ದಾಸಯ್ಯನವರನ್ನು ನಮ್ಮ ವಾಹನಗಳಲ್ಲೇ ಕರೆದುಕೊಂಡು ಬರಬೇಕು. ಮನೆಯವರು ಈತನ ಪಾದ ಪೂಜೆ ಮಾಡಿ ಮನೆಯೊಳಗೆ ಬರ ಮಾಡಿಕೊಳ್ಳುತ್ತಾರೆ, ನಂತರ ತಾನು ತಂದಿರುವ ವಿಗ್ರಹಗಳನ್ನು ಜೋಡಿಸಿ, ಮನೆಯ ಗಂಡಸರಿಗೆ ಎರಡು ಬಿಳಿ ಒಂದು ಕೆಂಪು ಹಾಗೂ ಹೆಂಗಸರಿಗೆ ಒಂದು ಕೆಂಪು ನಾಮ ಬಳಿದು ತನ್ನ ವಸೂಲಿ ಕಾರ್ಯಕ್ಕೆ ಚಾಲನೆ ಕೊಡುತ್ತಾನೆ. ವಿಳ್ಯದೆಲೆಯಲ್ಲಿರುವ ಗರಿ ಗರಿ ನೋಟಿನ ವಾಸನೆ ಹಿಡಿಯುತ್ತಾ ದೇವರ ಪೂಜೆ ಮಾಡುವ ದಾಸಯ್ಯನವರು ಜಾಗಟೆ ಬಾರಿಸಿ ಶಂಖ ಊದುವುದರ ಮೂಲಕ ದೇವರಿಗೆ ಮನೆಯವರ ಇರುವಿಕೆಯನ್ನು ತಿಳಿಸುತ್ತಾನೆ. ಪೂಜೆಗೆ ಸಸ್ಯಹಾರ ಎಡೆ ಇಟ್ಟಿದ್ದರೆ ಪರವಾಗಿಲ್ಲ ಮಾಸಂಹಾರಿವಿದ್ದರಂತು ಅದರ ಜೊತೆಗೆ ಮದ್ಯವನ್ನು ಸಹ ಇಟ್ಟು ಪೂಜೆ ಮಾಡಿಸಬೇಕು. ಹೀಗೆ ಎಡೆಗೆ ಇಟ್ಟ ಮದ್ಯವನ್ನು ತನ್ನ ಹೊಟ್ಟೆಯೊಳಗೆ ಇಳಿಸಿಕೊಂಡು ಗಂಟೆ ಬಾರಿಸುವ ದಾಸಯ್ಯನವರು ಹೋಗುವ ಮುನ್ನ ಪೂಜೆಗೆ ಇಟ್ಟ ಕಾಣಿಕೆಯ ಜೊತೆಗೆ ಹೊಸ ಗಂಟೆಗೆಂದು ಅಥವಾ ಹೊಸ ವಿಗ್ರಹ ಕೊಂಡುಕೊಳ್ಳಲೆಂದು ಇನ್ನೂ ಒಂದಷ್ಟು ಹಣವನ್ನು ಪೀಕುವುದುಂಟು, ಅಲ್ಲಿಗೆ ಆತ ಹಾಕಿದೆ ಉಂಡೆ ನಾಮಕ್ಕೆ ಬೆಲೆಬಂದಂತಾಯಿತು.
ಒಂದು ಮನೆಯಲ್ಲಿ 500 ರೂ. ಕಾಣಿಕೆ ಎಂದುಕೊಂಡರೂ ಒಂದು ಶನಿವಾರದಲ್ಲಿ ದಾಸಯ್ಯ ಪೂಜೆ ಮಾಡುವ 15 ಮನೆಗಳಲ್ಲಿ ಸಿಗುವ ಕಾಣಿಕೆ ಹಣ ಸುಮಾರು 7500. ಒಂದು ತಿಂಗಳಿಗೆ ಸುಮಾರು 30000. ಜೀವನ ಸಾಗಿಸಲು ಇಷ್ಟು ಸಾಕಲ್ಲವೇ? ಜೊತೆಗೆ ಸಣ್ಣ ಪುಟ್ಟ ದೇವಸ್ಥಾನಗಳನ್ನು ನಡೆಸುವ ಇವರು ವರ್ಷ ಪೂರ್ತಿ ಜೀವನ ನಡೆಸಲು ಯಾವುದೇ ಅಡ್ಡಿ ಇರುವುದಿಲ್ಲ. ದಾಸಯ್ಯನವರ ಆದಾಯದ ಮಾತುಕತೆ ಪಕ್ಕಕ್ಕೆ ಇಟ್ಟು ಮಾತನಾಡುವುದಾದರೆ, ನಮಗೆ ಕಾಡುವ ಪ್ರಶ್ನೆ ದೇವರ ಜೊತೆ ಮಾತನಾಡಲು ನಮಗೆ ಸಾಧ್ಯವಿಲ್ಲವೇ? ದಾಸಯ್ಯ ಮಾಡಿದ ಪೂಜೆ ಮಾತ್ರ ಪೂಜೆನಾ? ಪಾದ ಪೂಜೆ ಮಾಡಿ ಅವನಿಗೆ ಒಂದಷ್ಟು ದುಡ್ಡು, ಶರಾಬು ಕೊಟ್ಟು ಕುಡುಕರ ಕೈಯಲ್ಲಿ ಪೂಜೆ ಮಾಡಿಸುವುದೇ? ಈ ಪ್ರಶ್ನೆಗಳನ್ನು ನಮಗೆ ನಾವೆ ಕೇಳಿಕೊಳ್ಳಬೇಕು ಅಷ್ಟೆ.
ಈ ದಾಸಯ್ಯರ ಹಾವಳಿ ತಾಳಲಾರದೇ ಕೆಲವರು ಅವರ ಮನೆಗಳಲ್ಲಿ ಅವರೇ ಪೂಜೆ ಮಾಡಲು ಮುಂದಾಗಿದ್ದಾರೆ. ಆದರೂ ಅತೀ ಹೆಚ್ಚು ಜನರು ದಾಸಯ್ಯ ಗಂಟೆ ಬಾರಿಸಿ ಶಂಖ ಊದಿದರೇನೆ ದೇವರಿಗೆ ನಮ್ಮ ಇರುವಿಕೆ ತಿಳಿಯುವುದು ಎಂದುಕೊಂಡಿರುವುದಂತು ವಿಪರ್ಯಾಸದ ಸಂಗತಿ. ದೇವರನ್ನು ಭಕ್ತಿಯಿಂದ ನಾವೇ ಪೂಜಿಸೋಣ. ಇದಕ್ಕಾಗಿ ಮತ್ತೊಬ್ಬರನ್ನು ನಾವೇ ಬೆಳಸಿ ಇಂತಹ ಪರೋಕ್ಷ ವಸೂಲಿ, ಇಲ್ಲ ಸಲ್ಲದ ಆಚರಣೆಗಳನ್ನು ಬೆಂಬಲಿಸುವುದು ಸರಿಯೇ?
ನಾನು ಮೇಲೆ ಹೇಳಿದ ಇದಷ್ಟು ಬೆಂಗಳೂರು ನಗರದ ಕತೆಯಾದರೆ ಹಳ್ಳಿಗಳಲ್ಲಿ ಪರಿಸ್ಥಿತಿ ಅಷ್ಟೇನು ಹದಗೆಟ್ಟಿಲ್ಲ ಎನ್ನಬಹುದು. 'ಎಲ್ಲಾ ಕಡೆಯೂ ಹೀಗೆ ತಿನ್ನುವವರು ಇದ್ದೆ ಇರುತ್ತಾರೆ, ರಾಜಕಾರಣಿಗಳು ತಿನ್ನುವುದಿಲ್ಲವೆ? ನಾವು ಬದುಕಲಿ ಅವರು ಬದುಕಲಿ ಬಿಡ್ರಿ.' ಎಂದು ಹೇಳುವ ಮಂದಿಗೆ ಬಹುಶಃ ನನ್ನ ಬರಹ ಸಂಪೂರ್ಣ ಅರ್ಥಹೀನವಾಗಿ ಕಾಣಬಹುದು. ಇದು ಬರೇ ಬದುಕಿನ ಪ್ರಶ್ನೆಯಲ್ಲ, ನಾವು ಸಣ್ಣ ಸಣ್ಣ ವಿಚಾರಗಳನ್ನು ಅರಿತುಕೊಂಡು ಬದುಕಲು ಕಲಿಯದಿದ್ದರೆ ದೊಡ್ಡ ವಿಚಾರಗಳಲ್ಲಿ ಬದಲಾವಣೆ ಬಯಸುದಕ್ಕೆ ಸಾಧ್ಯವೇ ಇಲ್ಲ ಅನಿಸುತ್ತದೆ.
"ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?" - ಕುವೆಂಪು
ಕೊನೆ ನುಡಿ: ನಾನು ಮಾತನಾಡುತ್ತಿರುವುದು ದುಡ್ಡು ಪೀಕುವ, ಪಾದ ಪೂಜೆ ಮಾಡಿಸಿಕೊಳ್ಳುವ ಒಂದಷ್ಟು ಜನರ ಬಗ್ಗೆಯ ಹೊರತು ಯಾವುದೇ ಆಚರಣೆ ಬಗ್ಗೆಯಾಗಲಿ ಅಥವಾ ದೇವರ ಮೇಲೆ ಅವರವರಿಗೆ ಇರುವ ನಂಬಿಕೆಗಳ ಬಗ್ಗೆಯಾಗಲಿ ಅಲ್ಲ.